ನಮ್ಮ ಭಾರತದ ಇತಿಹಾಸದಲ್ಲಿ (Indian History) ಅನೇಕ ಜನರ ಹೆಸರುಗಳು ಅವರು ಮಾಡಿರುವ ಮಹಾನ್ ಕೆಲಸಗಳಿಗಾಗಿ ಇನ್ನೂ ಸಹ ಅಳಿಸಿ ಹೋಗದೆ ಇನ್ನೂ ಹಾಗೆಯೇ ಇದೆ. ಈ ಪಟ್ಟಿಯಲ್ಲಿ ಬರೀ ಪುರುಷರ ಹೆಸರುಗಳು ಅಷ್ಟೇ ಅಲ್ಲದೆ ಮಹಿಳೆಯರ ಹೆಸರುಗಳೂ ಇವೆ.ಭಾರತ ದೇಶದಲ್ಲಿ ಅತ್ಯಂತ ಬೆರಗುಗೊಳಿಸುವ, ಅಷ್ಟೇ ಬಲಶಾಲಿ ಮತ್ತು ಬೌದ್ಧಿಕವಾಗಿ ಪ್ರತಿಭಾನ್ವಿತ ಮಹಿಳೆಯರ (Women) ಪಟ್ಟಿಯನ್ನು ನೋಡಿದರೆ, ಅದರಲ್ಲಿ ಇಬ್ಬರು ಮಹಿಳೆಯರ ಹೆಸರು ಎದ್ದು ಕಾಣುತ್ತವೆ. ಅದರಲ್ಲಿ ಒಬ್ಬರು ಮಹಾರಾಣಿ ಗಾಯತ್ರಿ ದೇವಿ (Maharani Gayatri Devi) ಆದರೆ ಇನ್ನೊಬ್ಬರು ಭಾರತದ ದಿವಂಗತ ಮಾಜಿ ಪ್ರಧಾನಿಯಾದ ಇಂದಿರಾ ಗಾಂಧಿ (Indira Gandhi).
ಅವರು ತಮ್ಮ ಸೌಂದರ್ಯದಿಂದ ಮತ್ತು ಪ್ರಭಾವಶಾಲಿಯಾದ ಸ್ವಭಾವದಿಂದ ಈ ಇಬ್ಬರು ಮಹಿಳೆಯರು ಇಡೀ ಜಗತ್ತನ್ನೆ ಆಕರ್ಷಿಸಿದ್ದರು ಮತ್ತು ಇವರಿಬ್ಬರು ತಮ್ಮ ರಾಷ್ಟ್ರ ಮತ್ತು ಅದರ ನಾಗರಿಕರನ್ನು ಸಮೃದ್ಧಿಗೊಳಿಸುವಲ್ಲಿ ಶ್ರಮಿಸಿದರು ಮತ್ತು ಮಾರ್ಗದರ್ಶನ ಮಾಡಿದರು ಅಂತ ಹೇಳಬಹುದು. ಆದರೆ ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇರಲಿಲ್ವಂತೆ ನೋಡಿ.
ಇಂದಿರಾ ಗಾಂಧಿ ಮತ್ತು ಗಾಯತ್ರಿ ದೇವಿ ನಡುವೆ ಜಗಳವಾಗಿತ್ತಂತೆ..
ಇಂದಿರಾ ಗಾಂಧಿ ಮತ್ತು ಗಾಯತ್ರಿ ದೇವಿ ಅವರ ನಡುವೆ ಯಾವುದೋ ಒಂದು ವಿಷಯಕ್ಕೆ ಹೊಂದಾಣಿಕೆಯಾಗಲಿಲ್ಲವಂತೆ ಮತ್ತು ಈ ಜಗಳ ರಾಜಮಾತಾ ಗಾಯತ್ರಿ ದೇವಿಯ ಬಂಧನಕ್ಕೆ ಕಾರಣವಾಗಿತ್ತೆನ್ನಲಾಗಿದೆ.
ಇದನ್ನೂ ಓದಿ:
ಸೀತೆ ನೀಡಿದ ಶಾಪದಿಂದ ಇಂದಿಗೂ ಈ ಜನಾಂಗದ ಮಹಿಳೆಯರು ಪೂರ್ಣ ಬಟ್ಟೆ ಧರಿಸೋದಿಲ್ಲ!
ಜೂನ್ 26, 1975 ರಂದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಐತಿಹಾಸಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಈ ಘೋಷಣೆಯ ನಂತರ ಒಬ್ಬರ ನಂತರ ಒಬ್ಬರು ಎನ್ನುವಂತೆ ಅನೇಕ ಹೈ ಪ್ರೊಫೈಲ್ ವ್ಯಕ್ತಿಗಳನ್ನು ಬಂಧಿಸಲಾಯಿತು.
ರಾಜಮಾತಾ ಗಾಯತ್ರಿ ಕೂಡ ಈ ಪಟ್ಟಿಯಲ್ಲಿ ಇದ್ದರಂತೆ, ಭ್ರಷ್ಟಾಚಾರ-ಸಂಬಂಧಿತ ಆರೋಪಗಳ ಮೇಲೆ ಇವರು ಜೈಲು ಪಾಲಾದರಂತೆ. ಆದಾಗ್ಯೂ, ಅವರ ಬಂಧನವು ಹೆಚ್ಚು ರಾಜಕೀಯ ಜಗಳದಿಂದಾಗಿದೆ ಎಂದು ತೋರುತ್ತದೆ.
ಜೈಪ್ರಕಾಶ್ ನಾರಾಯಣ್ ಅವರ ಮಾರ್ಗದಲ್ಲಿ ನಡೆದ ಜೈಪುರದ ರಾಣಿ ಗಾಯತ್ರಿ ದೇವಿ ಅವರು 1962 ರಿಂದ ಜೈಪುರ ವಿಧಾನಸಭೆಯ ಸಕ್ರಿಯ ಸದಸ್ಯರಾಗಿದ್ದರು. ಇಂದಿರಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ವಿರೋಧವಾಗಿ ಜೆಪಿ ನಾರಾಯಣ್ ಹೆಚ್ಚು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದ್ದ ಕಾಲ ಅದು.
ಗಾಯತ್ರಿ ದೇವಿ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು..
ರಾಜಮಾತಾ ಗಾಯತ್ರಿ ದೇವಿ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದಾಯ ತೆರಿಗೆ ಇಲಾಖೆಯು 1.70 ಕೋಟಿ ಡಾಲರ್‌ಗಳು ಮತ್ತು ದುಬಾರಿ ಆಭರಣಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೊಂಡಿತ್ತಂತೆ.
ಆ ಅವಧಿಯಲ್ಲಿ, ಗಾಯತ್ರಿ ದೇವಿ ಅವರು ರಾಷ್ಟ್ರದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರು ತಮ್ಮ ವಿಶಿಷ್ಟ ಕೌಶಲ್ಯ ಮತ್ತು ಸೌಂದರ್ಯ ಎರಡಕ್ಕೂ ಹೆಸರುವಾಸಿಯಾಗಿದ್ದರು.
ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು?
ರಾಜಸ್ಥಾನಿ ಜನರು ಅವರನ್ನು ತುಂಬಾನೇ ಆರಾಧಿಸುತ್ತಿದ್ದರು ಮತ್ತು ಅವರು ರೈತರು ಮತ್ತು ಹೆಣ್ಣುಮಕ್ಕಳ ಶಿಕ್ಷಣ ಎದುರಿಸುತ್ತಿರುವ ಬಿಕ್ಕಟ್ಟು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಬೆಳಕಿಗೆ ತಂದು ಅವುಗಳನ್ನು ಪರಿಹರಿಸಲು ಶ್ರಮಿಸಿದರಂತೆ.
ಮಹಾರಾಣಿ ಗಾಯತ್ರಿ ದೇವಿ ಅವರು 1962 ರಿಂದ 1975 ರವರೆಗೆ ಸಂಸದರಾಗಿದ್ದರು. 1962 ರಲ್ಲಿ ಅವರು ಸ್ವತಂತ್ರ ಪಕ್ಷದ ಟಿಕೆಟ್‌ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು ಮತ್ತು ಕಾಂಗ್ರೆಸ್ ಅಭ್ಯರ್ಥಿ ಶಾರದಿ ದೇವಿ ಅವರನ್ನು ಭಾರಿ ಅಂತರದಿಂದ ಸೋಲಿಸಿದ್ದರು.
ಅವರು 250,272 ಮತಗಳಲ್ಲಿ 192,909 ಮತಗಳನ್ನು ಪಡೆದರು, ಆದರೆ ಕಾಂಗ್ರೆಸ್ ಅಭ್ಯರ್ಥಿ ಕೇವಲ 35,217 ಮತಗಳನ್ನು ಪಡೆದರು. ಇಷ್ಟು ದೊಡ್ಡ ಅಂತರದಿಂದ ಚುನಾವಣೆಯಲ್ಲಿ ಗೆದ್ದಿದ್ದಕ್ಕಾಗಿ ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ