ಇನ್ನೂ 229 ವರ್ಷ ಅಂತ್ಯವಾಗೋದಿಲ್ಲ ಬಡತನ, ಕೇವಲ 3 ವರ್ಷದಲ್ಲಿ ಶ್ರೀಮಂತರ ಸಂಪತ್ತು ದುಪ್ಪಟ್ಟು! ವರದಿ ಬಹಿರಂಗ

👇खबर सुनने के लिए प्ले बटन दबाएं

Oxfam Report: ಶತಮಾನಗಳಿಂದ ಜಗತ್ತಿನಲ್ಲಿ ಶ್ರೀಮಂತಿಕೆ ಮತ್ತು ಬಡತನ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದೆ. ಪ್ರಪಂಚದಾದ್ಯಂತದ ಯಾವುದೇ ಸರ್ಕಾರಗಳ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಬಡತನವು ಇನ್ನೂ ಕಣ್ಮರೆಯಾಗುತ್ತಿಲ್ಲ.

ಆದರೆ ಕಳೆದ 3 ವರ್ಷಗಳಲ್ಲಿ ಬಡವರ ಸಂಖ್ಯೆ ಹೆಚ್ಚಿದ್ದರೆ, ಶ್ರೀಮಂತರ ಸಂಪತ್ತು ದ್ವಿಗುಣಗೊಂಡಿದೆ. ಪ್ರಸಿದ್ಧ ಆಕ್ಸ್‌ಫ್ಯಾಮ್ ವರದಿ ಈ ಕುರಿತು ತನ್ನ ವರದಿಯಲ್ಲಿ ಬಹಿರಂಗಪಡಿಸಿದ್ದು, ಈ ರಿಪೋರ್ಟ್‌ನಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ಇರುವ ಆರ್ಥಿಕ ಅಸಮಾನತೆಯ ಅಂತರ ಎಂದಿಗಿಂತ ಹೆಚ್ಚಾಗಿರುವುದನ್ನು ಕಾಣಬಹುದು.

ಇದನ್ನೂ ಓದಿ:
Taleah Jayne: 21 ವರ್ಷದ ಹುಡುಗಿಗೆ ₹81 ಲಕ್ಷ ಸಂಬಳ, 4 ತಿಂಗಳು ರಜೆ! ಆದರೆ ಈ ಕೆಲಸ ಯಾರಿಗೂ ಬೇಡ್ವಂತೆ!

ಜಾಹೀರಾತು

ಆಕ್ಸ್‌ಫ್ಯಾಮ್ ವರದಿಯ ಪ್ರಕಾರ, ಎಲೋನ್ ಮಸ್ಕ್, ಬರ್ನಾರ್ಡ್ ಅರ್ನಾಲ್ಟ್, ಜೆಫ್ ಬೆಜೋಸ್, ಲ್ಯಾರಿ ಎಲಿಸನ್ ಮತ್ತು ಮಾರ್ಕ್ ಜುಕರ್‌ಬರ್ಗ್ ಸೇರಿದಂತೆ ವಿಶ್ವದ 5 ಶ್ರೀಮಂತರು ತಮ್ಮ ಸಂಪತ್ತನ್ನು 2020 ರಿಂದ ಬರೋಬ್ಬರಿ 72,022.33 ಕೋಟಿಗೆ ತಮ್ಮ ಸಂಪತ್ತನ್ನು ದ್ವಿಗುಣಗೊಳಿಸಿದ್ದಾರೆ. ಆದರೆ ಅದೇ ವೇಗದಲ್ಲಿ ಮತ್ತು ಅದೇ ಅವಧಿಯಲ್ಲಿ ವಿಶ್ವದಲ್ಲಿ 5 ಕೋಟಿಗಿಂತಲೂ ಹೆಚ್ಚು ಜನರು ಬಡತನದ ಕಪಿಮುಷ್ಠಿಗೆ ತಳ್ಳಲ್ಪಟ್ಟಿದ್ದಾರೆ.

ಮುಂಬರುವ ದಶಕವು ಶ್ರೀಮಂತರ ಹಿಡಿತದಲ್ಲಿ ಇರುತ್ತದೆ ಎಂದು ಆಕ್ಸ್‌ಫ್ಯಾಮ್ ವರದಿ ಹೇಳಿದ್ದು, ಶ್ರೀಮಂತ ಮತ್ತು ಬಡವರ ನಡುವಿನ ಈ ಆರ್ಥಿಕ ಅಸಮಾನತೆಯ ಪ್ರವೃತ್ತಿ ಇದೇ ರೀತಿ ಮುಂದುವರಿದರೆ, ಮುಂದಿನ 229 ವರ್ಷಗಳವರೆಗೆ ಪ್ರಪಂಚದಲ್ಲಿ ಬಡತನವು ನಿರ್ಮೂಲನೆಯಾಗುವುದಿಲ್ಲ ಎಂದು ವರದಿ ಎಚ್ಚರಿಕೆ ನೀಡಿದೆ. ಅಲ್ಲದೇ ಭವಿಷ್ಯದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆಕ್ಸ್‌ಫ್ಯಾಮ್ ವರದಿ ಹೇಳಿದೆ.

ಇದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ ಜಗತ್ತು ತನ್ನ ಮೊದಲ ಟ್ರಿಲಿಯನೇರ್ ಸಂಪತ್ತು ಹೊಂದಿದ ಕೈಗಾರಿಕೋದ್ಯಮಿಯನ್ನು ಪಡೆಯಲಿದೆ ಎಂದು ಆಕ್ಸ್‌ಫ್ಯಾಮ್ ವರದಿ ಹೇಳಿದ್ದು, ಆ ಮೂಲಕ ಶ್ರೀಮಂತರ ಮುಷ್ಠಿಗೆ ಎಲ್ಲಾ ಸರ್ಕಾರಗಳು ಸಿಕ್ಕಿದರೆ, ಬಡವರು ತಮ್ಮ ಕಷ್ಟದಿಂದ ಮೇಲೆ ಏಳಲು ಇನ್ನೂ ಬಹಳ ಸಮಯ ಬೇಕಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿದೆ.

ಇದನ್ನೂ ಓದಿ:
Janapada Rama: ಸೀತೆ ನೀಡಿದ ಶಾಪದಿಂದ ಇಂದಿಗೂ ಈ ಜನಾಂಗದ ಮಹಿಳೆಯರು ಪೂರ್ಣ ಬಟ್ಟೆ ಧರಿಸೋದಿಲ್ಲ!

80 ಕೋಟಿ ಕಾರ್ಮಿಕರ ಆದಾಯ ಕುಸಿತ!

ಜಾಹೀರಾತು

52 ದೇಶಗಳಲ್ಲಿ ಸುಮಾರು 80 ಕೋಟಿ ಕಾರ್ಮಿಕರ ಸರಾಸರಿ ನೈಜ ವೇತನ ಕುಸಿದಿದ್ದು, ಈ ಕಾರ್ಮಿಕರು ಕಳೆದ 2 ವರ್ಷಗಳಲ್ಲಿ $1.5 ಟ್ರಿಲಿಯನ್ ನಷ್ಟವನ್ನು ಅನುಭವಿಸಿದ್ದಾರೆ. ಅಸಮಾನತೆಯನ್ನು ಅಳೆಯುವ ಇತ್ತೀಚಿನ ಗಿನಿ ಸೂಚ್ಯಂಕವು ಜಾಗತಿಕ ಆದಾಯದ ಅಸಮಾನತೆಯ ವಿಷಯದಲ್ಲಿ ವಿಶ್ವದ ಅತ್ಯಂತ ಆರ್ಥಿಕ ಅಸಮಾನತೆಯನ್ನು ಹೊಂದಿರುವ ದೇಶ ದಕ್ಷಿಣ ಆಫ್ರಿಕಾ ಎಂದು ತೋರಿಸಿದೆ ಎಂದು ಆಕ್ಸ್‌ಫ್ಯಾಮ್ ಹೇಳಿದೆ.

ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು?


ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆಯಿಟ್ಟು ಮಲಗಬೇಕು?

ಕಳೆದ 3 ವರ್ಷಗಳಲ್ಲಿ, ಕೊರೊನಾ ಸಾಂಕ್ರಾಮಿಕ ಮತ್ತು ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಹಣದುಬ್ಬರವು ಕೋಟ್ಯಂತರ ಜನರನ್ನು ಬಡವಾಗಿಸಿದೆ ಎಂದು ಆಕ್ಸ್‌ಫ್ಯಾಮ್ ವರದಿ ಹೇಳಿದೆ. ಮತ್ತೊಂದೆಡೆ, ವಿಶ್ವದ ಕೆಲವು ಬಿಲಿಯನೇರ್‌ಗಳ ಸಂಪತ್ತು ಅಪಾರವಾಗಿ ಹೆಚ್ಚಾಯಿತು ಅನ್ನೋದು ಗಮನಾರ್ಹ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]