Maldives vs India: ನಾವು ಯಾರ ಹಂಗಲ್ಲೂ ಇಲ್ಲ! ಸೇನೆ ಕರೆಸಿಕೊಳ್ಳಲು ಭಾರತಕ್ಕೆ ಡೆಡ್​ಲೈನ್ ಕೊಟ್ಟ ಮಾಲ್ಡೀವ್ಸ್ ಅಧ್ಯಕ್ಷ!

👇खबर सुनने के लिए प्ले बटन दबाएं

ಮಾಲ್ಡೀವ್ಸ್: ಪ್ರವಾಸೋದ್ಯಮ (Tourism) ವಿಚಾರದಲ್ಲಿ ಭಾರತ ಮತ್ತು ಮಾಲ್ಡೀವ್ಸ್ (India vs Maldives) ನಡುವಿನ ರಾಜತಾಂತ್ರಿಕ ವಿವಾದದ ತಾರಕ್ಕೇರಿರುವ ಸಂದರ್ಭದಲ್ಲೇ ಮಾಲ್ಡೀವ್ಸ್ ಮತ್ತೊಮ್ಮೆ ಮಹತ್ವ ನಿರ್ಧಾರ ತೆಗೆದುಕೊಂಡಿದೆ. ತನ್ನ ದೇಶದಲ್ಲಿರುವ ಭಾರತದ ಸೇನೆಯನ್ನ (Indian Army) ವಾಪಸ್​ ಕರೆಸಿಕೊಳ್ಳುವಂತೆ ಭಾರತಕ್ಕೆ ಆಗ್ರಹಿಸಿದೆ. ಭಾರತ ವಿರೋಧಿ ಧೋರಣೆಯನ್ನು ಎದುರಿಸುತ್ತಿರುವ ಅಧ್ಯಕ್ಷ ಮೊಹಮ್ಮದ್ ಮುಯಿಜು ಚೀನಾ ಪ್ರವಾಸ ಮುಗಿಸಿ ಬರುತ್ತಿದ್ದಂತೆ ದ್ವೀಪದಲ್ಲಿರುವ ಭಾರತೀಯ ಸೈನಿಕರನ್ನು ದೇಶ ತೊರೆಯಲು ತಿಳಿಸಿದ್ದಾರೆ.

ಮಾರ್ಚ್ 15 ಡೆಡ್​ಲೈನ್

ಮಾರ್ಚ್ 15 ರೊಳಗೆ ತನ್ನ ದೇಶದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತಕ್ಕೆ ಡೆಡ್​ಲೈನ್ ನೀಡಿದೆ. ಚೀನಾ ಜತೆಗಿನ ಸಂಬಂಧಕ್ಕೆ ಒಲವು ತೋರಿರುವ ಮಾಲ್ಡೀವ್ಸ್​ ಭಾರತ ವಿರೋಧಿ ಧೋರಣೆ ಮುಂದುವರಿಸಿದ್ದಾರೆ ಮೈಝೂ ಚೀನಾಕ್ಕೆ ತೆರಳಿದ ಮೂರು ದಿನಗಳ ನಂತರ ಈ ಘೋಷಣೆ ಬಂದಿರುವುದು ಅಚ್ಚರಿಯ ಸಂಗತಿಯಾಗಿದೆ.

ಜಾಹೀರಾತು

ಇದನ್ನೂ ಓದಿ: Ram Mandir: ರಾಮಮಂದಿರಕ್ಕೆ ₹27 ಲಕ್ಷ ದೇಣಿಗೆ ನೀಡಿದ್ದ ನಿವೃತ್ತ ನರ್ಸ್​! ಪ್ರಾಣ ಪ್ರತಿಷ್ಠಾಗೆ ಸಿಕ್ತು ವಿಶೇಷ ಆಹ್ವಾನ

ಇಂಡಿಯಾ ಔಟ್​ಗೆ ಬೆಂಬಲ

ಇಂಡಿಯಾ ಔಟ್ ಎಂಬ ಘೋಷಣೆಯೊಂದಿಗೆ ಮುಯಿಝೂ ಚುನಾವಣಾ ಪ್ರಚಾರವನ್ನೂ ನಡೆಸಿದ್ದರು. ತನ್ನ ದೇಶದ ಸಾರ್ವಭೌಮತ್ವಕ್ಕೆ ತಾವೂ ಬದ್ಧ ಎಂದು ಹೇಳಿಕೆಗಳನ್ನು ನೀಡುತ್ತಿರುವ ಈಗಿನ ಸರಕಾರ ಚೀನಾದ ಜೊತೆಗೆ ಕೈಜೋಡಿಸುತ್ತಿದೆ.

ಮೋದಿ ಭೇಟಿ ಬಳಿಕ ವಿವಾದ

ಇತ್ತೀಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಆ ದೇಶದ ಸಚಿವರು ಅನುಚಿತ ಕಾಮೆಂಟ್​ಗಳನ್ನು ಮಾಡಿದ್ದರು. ಈ ಬಗ್ಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಾಯ್ಕಾಟ್​ ಮಾಲ್ಡೀವ್ಸ್ ಎಂದು ಟ್ರೆಂಡ್ ಮಾಡಿದ್ದರು. ಇದರಿಂದ ಸರ್ಕಾರ ಮೂವರು ಸಚಿವರನ್ನು ಅಮಾನತು ಮಾಡಿತ್ತು. ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್ ಹೋಟೆಲ್ ಬುಕಿಂಗ್ ಮತ್ತು ವಿಮಾನ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದರು.

ಇದನ್ನೂ ಓದಿ:
ಚಿಂದಿ ಆಯುವ ಮಹಿಳೆಗೂ ರಾಮಮಂದಿರ ಉದ್ಘಾಟನೆಗೆ ಆಹ್ವಾನ! ಆಕೆ ನೀಡಿದ್ದ ದೇಣಿಗೆ ಎಷ್ಟು ಗೊತ್ತಾ?

ಇದೇ ವೇಳೆ ಚೀನಾ ಪ್ರವಾಸದಿಂದ ಬಂದಿರುವ ಮೊಹಮ್ಮದ್ ಮುಯಿಜು, ಯಾವುದೇ ದೇಶಕ್ಕೆ ನಮಗೆ ಕಿರುಕುಳ ನೀಡುವ ಹಕ್ಕು ಇಲ್ಲ, ನಾವು ಚಿಕ್ಕ ರಾಷ್ಟ್ರವಾಗಿರಬಹುದು, ಆದರೆ 9 ಲಕ್ಷ ಚದರ ಕಿಲೋ ಮೀಟರ್ ವಿಸ್ತಾರವಾದ ವಿಶೇಷ ಆರ್ಥಿಕ ವಲಯವನ್ನು ಹೊಂದಿದ್ದೇವೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಹಿಂದೂ ಮಹಾಸಾಗರ ಅತ್ಯಂತ ಹೆಚ್ಚಿನ ಜಾಗವನ್ನು ಮಾಲ್ಡೀವ್ಸ್ ಹೊಂದಿದೆ. ಈ ಮಹಾಸಾಗರ ಯಾರ ಸ್ವತ್ತಲ್ಲ, ನಾವು ಯಾರ ಹಂಗಿನಲ್ಲೂ ಇಲ್ಲ, ನಮಗೆ ಬೆದರಿಕೆ ಹಾಕುವ ಲೈಸೆನ್ಸ್​ ಯಾವ ದೇಶಕ್ಕೂ ಇಲ್ಲ ಎಂದು ಮಾಧ್ಯಮಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]