ನವದೆಹಲಿ: ಇಂದಿನಿಂದ ಆರಂಭವಾಗಲಿರುವ ರಾಹುಲ್ ಗಾಂಧಿ ಅವರ ನೇತೃತ್ವದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ಗೂ (Bharat Jodo Nyay Yatra) ಮುನ್ನವೇ ಕಾಂಗ್ರೆಸ್‌ಗೆ ಮಹಾರಾಷ್ಟ್ರದಲ್ಲಿ ಬಹುದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ ಹಿರಿಯ ನಾಯಕ ಮಿಲಿಂದ್ ದಿಯೋರಾ (Milind Deora) ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಮಾಹಿತಿಯ ಪ್ರಕಾರ, ಮಿಲಿಂದ್ ದಿಯೋರಾ ಅವರು ಇಂದು ಮಧ್ಯಾಹ್ನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲಿದ್ದಾರೆ. ಏತನ್ಮಧ್ಯೆ, ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವ ನಿರ್ಧಾರದ ಸಮಯದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಘೋಷಣೆಯ ಸಮಯವನ್ನು ಪಿಎಂ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ ನಿರ್ಧರಿಸಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:
Congress: ಭಾರತ್ ಜೋಡೋ ಯಾತ್ರೆ ದಿನವೇ ಕಾಂಗ್ರೆಸ್‌ಗೆ ಶಾಕ್, ಪಕ್ಷ ಬಿಟ್ಟ ರಾಹುಲ್ ಪಡೆಯ ಪ್ರಮುಖ ನಾಯಕ..!
ಈ ಬಗ್ಗೆ ಜೈರಾಮ್ ರಮೇಶ್ ಅವರು ಮಿಲಿಂದ್ ದಿಯೋರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಜೊತೆಗೆ ಮಿಲಿಂದಾ ದಿಯೋರಾ ಅವರ ತಂದೆ ಮತ್ತು ಮಾಜಿ ಕೇಂದ್ರ ಸಚಿವ ಮುರಳಿ ದೇವ್ರಾ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೈರಾಮ್ ರಮೇಶ್, ‘ಮುರಳಿ ದಿಯೋರಾ ಅವರೊಂದಿಗಿನ ನನ್ನ ದೀರ್ಘ ಒಡನಾಟವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಅವರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಆತ್ಮೀಯ ಸ್ನೇಹಿತರನ್ನು ಹೊಂದಿದ್ದರು, ಆದರೆ ಅವರು ನಿಷ್ಠಾವಂತ ಕಾಂಗ್ರೆಸ್ಸಿಗರಾಗಿದ್ದರು, ಅವರು ಯಾವಾಗಲೂ ಪ್ರತಿ ಕಷ್ಟದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ನಿಂತಿದ್ದರು. ಹಾಗೇ ಆಗಲಿ’ ಎಂದು ಹೇಳಿದ್ದಾರೆ.
ಇನ್ನು, ಮಿಲಿಂದ್ ದಿಯೋರಾ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರವನ್ನು ಘೋಷಿಸುವ ಮುನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದರು ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ, ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ನ ಸಾಂಪ್ರದಾಯಿಕ ಸ್ಥಾನ ಎಂದು ಮಿಲಿಂದ್ ದಿಯೋರಾ ಅವರು ಜೈರಾಮ್ ರಮೇಶ್‌ಗೆ ಹೇಳಿದ್ದರು. 2014 ಮತ್ತು 2019ರಲ್ಲಿ ಮೋದಿ ಅಲೆಯಲ್ಲಿ ಶಿವಸೇನೆಯ ಅರವಿಂದ್ ಸಾವಂತ್ ಗೆದ್ದಿದ್ದರು, ಆದರೆ ಈಗ ಪ್ರಧಾನಿ ಮೋದಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದೊಂದಿಗೆ ಇಲ್ಲ, ಆದ್ದರಿಂದ ಕಾಂಗ್ರೆಸ್ ಆ ಸ್ಥಾನವನ್ನು ವಶಪಡಿಸಿಕೊಳ್ಳುವ ಯೋಚನೆಯಲ್ಲಿದೆ.
ಇದನ್ನೂ ಓದಿ:
KSRTC: ‘ಅಜ್ಜಿ ಟಿಕೆಟ್ ಕೊಡಿ’ ಎಂದ ಶಾಲಾ ವಿದ್ಯಾರ್ಥಿನಿ ಮೇಲೆ ಕೋಪಗೊಂಡು ಕಪಾಳಮೋಕ್ಷ ಮಾಡಿದ ಲೇಡಿ ನಿರ್ವಾಹಕಿ!
ಶುಕ್ರವಾರ ಜೈರಾಮ್ ರಮೇಶ್ ಅವರನ್ನು ಸಂಪರ್ಕಿಸಿದ ಮಿಲಿಂದ್ ಅವರು ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಮತ್ತು ಅವರ ಪರವಾಗಿಯೂ ವಾದ ಮಂಡಿಸುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅದಕ್ಕೂ ಮುನ್ನವೇ ಅಂದರೆ ಭಾನುವಾರ ನ್ಯಾಯ ಯಾತ್ರೆ ಆರಂಭಕ್ಕೂ ಮೊದಲೇ ಮಿಲಿಂದ್ ಅವರು ಏಕಾಏಕಿ ಪಕ್ಷ ತೊರೆದಿರುವುದು ಕಾಂಗ್ರೆಸ್ ಗೆ ಅಚ್ಚರಿ ಮೂಡಿಸಿದೆ.
ರಂಗೋಲಿಯಲ್ಲೂ ರಾಮ ಜಪ!
ಆದರೆ, ಮೂಲಗಳ ಪ್ರಕಾರ, ಮಿಲಿಂದ್ ಪಕ್ಷ ತೊರೆಯುವ ಕುರಿತು ಟ್ವೀಟ್ ಮಾಡಿದ ತಕ್ಷಣ, ಅದನ್ನು ತಮ್ಮ ಮತ್ತು ರಾಹುಲ್ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದ್ದ ಜೈರಾಮ್ ಅವರಿಗೂ ಕಳುಹಿಸಿದ್ದಾರೆ. ಜತೆಗೆ ಜೈರಾಮ್ ಅವರಿಗೆ ವೈಯಕ್ತಿಕ ಸಂದೇಶ ರವಾನಿಸಿದ್ದು, ‘ಪಕ್ಷಕ್ಕೆ ಸಂಬಂಧಿಸಿದಂತೆ ನಿಮ್ಮ ನಿರೀಕ್ಷೆಗೆ ತಕ್ಕಂತೆ ನಾನು ಕೆಲಸ ಇರಲು ಸಾಧ್ಯವಾಗಲಿಲ್ಲ. ಭವಿಷ್ಯದಲ್ಲಿಯೂ ನಾವು ಸಂಪರ್ಕದಲ್ಲಿರುತ್ತೇವೆ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ