900 ಕೆಜಿ ರವೆ-1000 ಕೆಜಿ ತುಪ್ಪ, 1000 ಕೆಜಿ ಸಕ್ಕರೆ- 2000 ಲೀಟರ್ ಹಾಲು! ಒಂದೂವರೆ ಲಕ್ಷ ಮಂದಿಗೆ ರಾಮ್‌ ಹಲ್ವಾ!Ayodhya Ram Mandir Ram halwa to be prepared by chef vishnu manoher – News18 ಕನ್ನಡ

👇खबर सुनने के लिए प्ले बटन दबाएं

ಅಯೋಧ್ಯೆಯಲ್ಲಿ ರಾಮಮಂದಿರ (Ayodhya Ram Mandir) ಉದ್ಘಾಟನೆ ದಿನ ಸಮೀಪಿಸುತ್ತಿದ್ದಂತೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಮುಂದಿನ ಸೋಮವಾರ, ಜನವರಿ 22 ರಂದು ಬಾಲ ರಾಮನ ದೇವಾಲಯದ ಉದ್ಘಾಟನೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಗ್ಪುರದ ಬಾಣಸಿಗ ವಿಷ್ಣು ಮನೋಹರ್ (Vishnu Manoher) ಅವರು ರಾಜಮನೆತನದ ವಿಶೇಷ ಖಾದ್ಯಗಳನ್ನು ಅಡುಗೆ ಮಾಡಲಿದ್ದಾರೆ. ಇವರಿಂದ 7000 ಕೆಜಿ ‘ರಾಮ್ ಹಲ್ವಾ’ (Ram Halwa) ತಯಾರಿಸಲಾಗುತ್ತಂತೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ವಿಷ್ಣು ಮನೋಹರ್ ವಿಶೇಷ ಕಡಾಯಿಯನ್ನು ಸಿದ್ಧಪಡಿಸಿದ್ದಾರೆ. ರಾಮಮಂದಿರದ ಆವರಣದಲ್ಲಿರುವ ಬೃಹತ್ ಬಾಣಲೆಯಲ್ಲಿ ಅಡುಗೆ ಮಾಡಲಾಗುವುದು. ಒಟ್ಟಿಗೆ 12 ಸಾವಿರ ಲೀಟರ್ ಬಳಕೆ ಮಾಡಬಹುದು.

ಜಾಹೀರಾತು

7000 ಕೆಜಿ ರಾಮ್‌ ಹಲ್ವಾ!

ವಿಷ್ಣು ಮನೋಹರ್ ಮಾತನಾಡಿ, ‘ಈ ನಿರ್ದಿಷ್ಟ ಕಡಾಯಿಯ ತೂಕ 1300 ರಿಂದ 1400 ಕೆ.ಜಿ. ಸ್ಟೀಲ್ ಪ್ಯಾನ್‌ನ ಮಧ್ಯ ಭಾಗವು ಕಬ್ಬಿಣವಾಗಿದೆ. ಇದರಿಂದ ಹಲ್ವಾ ಮಾಡಿದಾಗ ಅದು ಸುಡುವುದಿಲ್ಲ. 10 ಅಡಿಯಿಂದ 10 ಅಡಿ ಅಳತೆಯ ಈ ಕಡಾಯಿಯು ಒಮ್ಮೆಗೆ 12,000 ಲೀಟರ್ ದ್ರವವನ್ನು ಹಿಡಿದಿಟ್ಟುಕೊಳ್ಳಬಲ್ಲದು. ಈ ಕಡಾಯಿಯಲ್ಲಿ 7 ಸಾವಿರ ಕೆಜಿ ಹಲ್ವಾ ಬೇಯಿಸಲಾಗುತ್ತದೆ ಎಂದಿದ್ದಾರೆ. ಈ ಕೌಲ್ಡ್ರನ್ ಅನ್ನು ಎತ್ತಲು ಕ್ರೇನ್ ಅಗತ್ಯವಿದೆ.  

ಒಂದೂವರೆ ಲಕ್ಷ ಭಕ್ತರಿಗೆ ವಿತರಣೆ!

ರಾಮ್‌ ಹಲ್ವಾವನ್ನು 900 ಕೆಜಿ ರವೆ, 1000 ಕೆಜಿ ತುಪ್ಪ, 1000 ಕೆಜಿ ಸಕ್ಕರೆ, 2000 ಲೀಟರ್ ಹಾಲು, 2500 ಲೀಟರ್ ನೀರು, 300 ಕೆಜಿ ಡ್ರೈ ಫ್ರೂಟ್ಸ್, 75 ಕೆಜಿ ಏಲಕ್ಕಿ ಪುಡಿಯೊಂದಿಗೆ ತಯಾರಿಸಲಾಗುತ್ತದೆ. ಬಾಲ ರಾಮ ಹಲ್ವಾವನ್ನು ಅರ್ಪಿಸಿದ ನಂತರ , ಹಲ್ವಾವನ್ನು 1 ಲಕ್ಷದಿಂದ 1.5 ಲಕ್ಷ ಭಕ್ತರಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ:
ರಾಮ ಮಂದಿರ ಪ್ರಾಣ ಪ್ರತಿಷ್ಠೆಗೂ ಮುನ್ನ 11 ದಿನಗಳವರೆಗೆ ಉಪವಾಸ ಮಾಡ್ತಿರುವ ಪ್ರಧಾನಿ! ನಿಮ್ಮ ಉಪವಾಸ ಹೇಗಿರಬೇಕು ನೋಡಿ

ಜಾಹೀರಾತು

ಮೋದಿಯಿಂದ ಬಾಲರಾಮನ ಪ್ರಾಣ ಪ್ರತಿಷ್ಠೆ!

ಜನವರಿ 22 ರಂದು ನಡೆಯಲಿರುವ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಅಯೋಧ್ಯೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶ-ವಿದೇಶಗಳ ಹಲವು ಪ್ರಮುಖ ಅತಿಥಿಗಳಿಗೆ ಆಹ್ವಾನ ಪತ್ರಗಳು ಬಂದಿವೆ. ಮುಖ್ಯ ಕಾರ್ಯಕ್ರಮಕ್ಕೆ ಒಂದು ವಾರ ಮುಂಚಿತವಾಗಿ, ಜನವರಿ 16 ರಿಂದ ಅಯೋಧ್ಯೆಯಲ್ಲಿ ರಾಮಲಾಲಾ ಅವರ ಪ್ರಾಣ ಸ್ತಷ್ಕಾ ಹಂತವು ಪ್ರಾರಂಭವಾಗಲಿದೆ.

ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?


ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?

11 ದಿನ ಪ್ರಧಾನಿ ಮೋದಿ ಉಪವಾಸ!

ರಾಮ ಮಂದಿರ (Ram Mandir) ಪ್ರಾಣ ಪ್ರತಿಷ್ಠೆಯ ನಿರೀಕ್ಷೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು 11 ದಿನಗಳವರೆಗೆ ಉಪವಾಸ ವೃತ ಕೈಗೊಂಡಿರುವುದು ಎಲ್ಲರಿಗೂ ಗೊತ್ತು. ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಕಾರಣಗಳಿಗಾಗಿ ಜನರು ಅನೇಕ ಸಂದರ್ಭಗಳಲ್ಲಿ ಉಪವಾಸ ಮಾಡುವುದನ್ನು ನಾವು ನೋಡಿರುತ್ತೇವೆ. ಹೀಗೆ ಉಪವಾಸ ಮಾಡುವಾಗ ದೇಹದ ಶಕ್ತಿಯನ್ನು ಹೇಗೆ ಕಾಪಾಡಿಕೊಳ್ಳುವುದು ಅನ್ನೋದು ಅನೇಕರಿಗೆ ತಿಳಿದಿರುವುದಿಲ್ಲ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]