ಸೀತೆ ನೀಡಿದ ಶಾಪದಿಂದ ಇಂದಿಗೂ ಈ ಜನಾಂಗದ ಮಹಿಳೆಯರು ಪೂರ್ಣ ಬಟ್ಟೆ ಧರಿಸೋದಿಲ್ಲ!

👇खबर सुनने के लिए प्ले बटन दबाएं

ಜನಪದರು ಕಟ್ಟಿಕೊಟ್ಟ ರಾಮಾಯಣದ (Janapada Ramayana) ಶಕ್ತಿಯೇ ಅಂತಹುದು. ಅಂದಿನಿಂದ ಇಂದಿನ ತನಕ ತನ್ನ ಪರಿಮಿತಿಯನ್ನು ಕಾಪಾಡಿಕೊಂಡೇ ಬಂದಿದೆ. ಒಡಿಶಾದ ಮಲ್ಕನಗಿರಿಯ ಬೋಂಡಾ ಬುಡಕಟ್ಟು ಸಮುದಾಯದಲ್ಲೂ ವಿಶಿಷ್ಟವಾದ ರಾಮಯಾಣದ ಕಥೆಗಳು ಸೇರಿಕೊಂಡಿವೆ.

ನೇರವಾಗಿ ಕಥೆಗೆ ಬರೋದಾದ್ರೆ, ಒಂದು ದಿನ ರಾಮನು ಲಕ್ಷ್ಮಣ ಮತ್ತು ಸೀತೆಯೊಂದಿಗೆ ಕಾಡಿನಲ್ಲಿ ಅಲೆದಾಡುತ್ತಿರುವಾಗ, ಬೋಂಡಾ ಸ್ತ್ರೀಯರು ಎರಡು ಕಾರಣಗಳಿಗಾಗಿ ಅವರನ್ನು ನೋಡಿ ನಗುತ್ತಾರೆ. ಒಂದು ಹೆಣ್ಣೊಬ್ಬಳು ಎರಡು ಗಂಡುಗಳೊಂದಿಗೆ ಇರೋದು. ಇನ್ನೊಂದು ಹೆಣ್ಣು ತನ್ನ ಖಾಸಗಿ ಅಂಗಗಳನ್ನು ಮುಚ್ಚಲು ತುಂಬಾ ತೆಳುವಾದ ಬಟ್ಟೆಗಳನ್ನು ಧರಿಸಿರುವುದು. ಅಂದಹಾಗೆ ಸೀತೆಗೆ ಬಟ್ಟೆಯನ್ನು ಕೊಟ್ಟಿರುವುದು ಬ್ರಹ್ಮ ಅನ್ನೋದು ಆಕೆಗೆ ತಿಳಿದಿತ್ತು.

ಜಾಹೀರಾತು

ಇದನ್ನೂ ಓದಿ:
Photos: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲಿನ ವಿಶೇಷತೆ ಏನು ಗೊತ್ತಾ? ಯಾರಿಗೂ ಗೊತ್ತಿರದ ಸಂಗತಿ ಇದು!

ಹೀಗಾಗಿ ತಾನು ಉಟ್ಟ ವಸ್ತ್ರವನ್ನು ನೋಡಿ ನಕ್ಕಿದ್ದಕ್ಕಾಗಿ ಬೋಂಡಾ ಬುಡಕಟ್ಟು ಸಮುದಾಯದ ಮಹಿಳೆಯರ ಬಗ್ಗೆ ಕೋಪಗೊಂಡು ಸೀತೆ ಶಾಪವನ್ನು ನೀಡುತ್ತಾಳೆ. ‘ನೀವೂ ಹೆಣ್ಣುಗಳಾಗಿ ಮತ್ತೊಬ್ಬ ಹೆಣ್ಣಿನ ಬಟ್ಟೆಯನ್ನು ನೋಡಿ ನಕ್ಕಿದ್ದೀರಿ. ಇದಕ್ಕಾಗಿ ನೀವು ತಕ್ಕ ಶಿಕ್ಷೆ ಅನುಭವಿಸಲೇಬೇಕು. ಇನ್ನುಮುಂದೆ ಬೋಂಡಾ ಸಮುದಾಯದ ಸ್ತ್ರೀಯರು ಎಂದಿಗೂ ಪೂರ್ತಿ ಬಟ್ಟೆಯನ್ನು ಉಡಬಾರದು. ನೀವು ಪೂರ್ಣ ಬಟ್ಟೆಯನ್ನು ಧರಿಸಿದರೂ ನಿಮ್ಮ ದೇಹವು ಆ ಬಟ್ಟೆಯ ಶಾಖವನ್ನು ಎಂದಿಗೂ ಸಹಿಸಬಾರದು’ ಎಂದು ಸೀತೆ ಶಾಪವನ್ನು ನೀಡುತ್ತಾಳೆ.

ಹೀಗಾಗಿ, ಇಂದಿಗೂ ಸಹ ಬೋಂಡಾ ಸಮುದಾಯದ ಹೆಂಗಸರು ಅರೆಬರೆ ಬಟ್ಟೆಯನ್ನು ಧರಿಸುತ್ತಾರೆ. ಬೋಂಡಾ ಗ್ರಾಮಗಳಿಂದ ಹಿರಿಯ ವಿದ್ವಾಂಸ ವೆರಿಯರ್ ಎಲ್ವಿನ್ ಅವರು ಸಂಗ್ರಹಿಸಿದ ಜನಪದ ಪುರಾಣದ ಕಥೆಯಲ್ಲಿ ಬೋಂಡಾ ಮಹಿಳೆಯರು ತಮ್ಮ ದೇಹವನ್ನು ಮುಚ್ಚಲು ಬಟ್ಟೆಯನ್ನು ಏಕೆ ಬಳಸುವುದಿಲ್ಲ ಎಂಬುದನ್ನು ವಿವರಿಸಲಾಗಿದೆ. ಈ ಪುರಾಣವು ರಾಮ, ಲಕ್ಷ್ಮಣ ಮತ್ತು ಸೀತೆಯೊಂದಿಗೆ ಮಿಳಿತಗೊಂಡಿದೆ. (ಎಲ್ವಿನ್ 1950: 63-4). ಬೋಂಡಾ ಉಯಿಲುಗಳಲ್ಲಿ ಸೀತಾಕುಂಡ್ ಎಂಬ ಜಲಮೂಲ ಕೂಡ ಕಂಡುಬರುತ್ತದೆ.

ಇದನ್ನೂ ಓದಿ:
Janapada Ramayana: ಕೇರಳದ ಈ ಜನಪದ ಕಥೆ ಗೊತ್ತಾ? ಲವ-ಕುಶರೇ ಈ ಬುಡಕಟ್ಟು ಸಮುದಾಯದ ಅಳಿಯಂದಿರು!

ಜಾಹೀರಾತು

ಮೇಲಿನ ಜನಪದ ಕಥೆಯ ಪ್ರಕಾರ ತಿಳಿದು ಬರೋದು ಏನೆಂದರೆ ಬೋಂಡಾ ಬುಡಕಟ್ಟು ಸಮುದಾಯದ ಜನರು ತಮ್ಮ ಪೂರ್ವಜರನ್ನು ರಾಮನ ಸಮಕಾಲೀನರು ಎಂದು ತೋರಿಸಲು ಪ್ರಯತ್ನಿಸಿದ್ದಾರೆ. ಇದು ಭಾರತದ ವಿವಿಧ ಪ್ರದೇಶಗಳ ಬುಡಕಟ್ಟು ಜನಾಂಗದವರಲ್ಲಿ ರಾಮ-ಕಥೆಯ ವ್ಯಾಪ್ತಿ ವಿಸ್ತರಿಸಿಕೊಂಡಿರುವುದನ್ನು ತೋರಿಸುತ್ತದೆ.

ಕೊಪ್ಪಳದ ಭೈರಾಪುರದ ಕಥೆ ಇದು!


ಕೊಪ್ಪಳದ ಭೈರಾಪುರದ ಕಥೆ ಇದು!

ಮಧ್ಯ ಭಾರತದ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳ ಮೂಲ ಪುರಾಣಗಳ ಪ್ರಕಾರ ಆ ಸಮುದಾಯಗಳು ವಿಶೇಷವಾಗಿ ಆಳುವ ರಾಜವಂಶಗಳೆಂದು ತಿಳಿದು ಬರುತ್ತದೆ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]