ವಿಪಕ್ಷಗಳ ಮೈತ್ರಿಕೂಟಕ್ಕೆ ಸೇರೋದಿಲ್ಲ, ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸ್ತೀವಿ; ಮಾಯಾವತಿ ಘೋಷಣೆ

👇खबर सुनने के लिए प्ले बटन दबाएं

ಲಕ್ನೋ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜವಾದಿ (BSP) ವಿಪಕ್ಷಗಳ ಒಕ್ಕೂಟವಾದ ಇಂಡಿಯಾ ಮೈತ್ರಿಕೂಟಕ್ಕೆ (I.N.D.I.A) ಸೇರೋದಿಲ್ಲ, ಬದಲಾಗಿ ಏಕಾಂಗಿಯಾಗಿ ಲೋಕಸಭೆ ಚುನಾವಣೆಯನ್ನು ಎದುರಿಸುವುದಾಗಿ ಘೋಷಿಸಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನವಾದ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು, ಲೋಕಸಭೆ ಚುನಾವಣೆಗೆ ತಮ್ಮ ಪಕ್ಷದ ಕಾರ್ಯತಂತ್ರವನ್ನು ಬಹಿರಂಗಪಡಿಸಿದರು. ವಿರೋಧ ಪಕ್ಷದ ಮೈತ್ರಿಯಾದ ‘ಇಂಡಿಯಾ’ ಒಕ್ಕೂಟದೊಂದಿಗೆ ತಮ್ಮ ಪಕ್ಷ ಸೇರೋದಿಲ್ಲ. ಉತ್ತರಪ್ರದೇಶದಲ್ಲಿ ಬಿಎಸ್ಪಿ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು.

ಜಾಹೀರಾತು

ಇದನ್ನೂ ಓದಿ:
Photos: ಅಯೋಧ್ಯೆ ರಾಮಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲಿನ ವಿಶೇಷತೆ ಏನು ಗೊತ್ತಾ? ಯಾರಿಗೂ ಗೊತ್ತಿರದ ಸಂಗತಿ ಇದು!

ಆ ಮೂಲಕ ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿಯಾಗುವ ಇರಾದೆ ಇಲ್ಲ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದ ಮಾಯಾವತಿ, ನನ್ನ ಜನ್ಮದಿನವನ್ನು ಇಂದು ಸಾರ್ವಜನಿಕ ಕಲ್ಯಾಣ ದಿನವನ್ನಾಗಿ ಆಚರಿಸಲಾಗುತ್ತಿದೆ. ನಾವು ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಸರ್ಕಾರವನ್ನು ಆಡಳಿತ ಮಾಡಿದ್ದೇವೆ. ಅದರಲ್ಲಿ ನಾವು ಎಲ್ಲಾ ಜನರ ಕಲ್ಯಾಣ ಮತ್ತು ಎಲ್ಲಾ ಜನರ ಸಂತೋಷಕ್ಕಾಗಿ ಕೆಲಸ ಮಾಡಿದ್ದೇವೆ. ನಂತರದ ಸರ್ಕಾರಗಳು ನಮ್ಮ ಯೋಜನೆಗಳನ್ನು ನಕಲು ಮಾಡುವ ಮೂಲಕ ನಮ್ಮ ಜನರಿಗೆ ಮಂಕುಬೂದಿ ಎರಚುತ್ತಿದೆ. ಹೀಗಿದ್ದರೂ ಜಾತೀಯತೆ, ಬಂಡವಾಳಶಾಹಿ ಮತ್ತು ಸಂಕುಚಿತ ಮನೋಭಾವನೆಯಿಂದ ಜನರಿಗೆ ಈ ಯೋಜನೆಗಳ ಸಂಪೂರ್ಣ ಲಾಭ ಸಿಗುತ್ತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ, ‘ಈಗಿನ ರಾಜ್ಯ ಮತ್ತು ಕೇಂದ್ರ ಸರ್ಕಾರವು ಉಚಿತ ಪಡಿತರ ನೀಡುವ ಮೂಲಕ ಜನರನ್ನು ಗುಲಾಮರನ್ನಾಗಿ ಮತ್ತು ಅಸಹಾಯಕರನ್ನಾಗಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಧರ್ಮ ಮತ್ತು ಸಂಸ್ಕೃತಿಯ ರಾಜಕಾರಣ ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ದುರ್ಬಲಗೊಳಿಸುತ್ತದೆ. ಬಿಜೆಪಿ ಸರ್ಕಾರವು ಕೋಮುವಾದಿ ಮತ್ತು ಸಂಕುಚಿತ ಮನೋಭಾವವನ್ನು ಹೊಂದಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:
Taleah Jayne: 21 ವರ್ಷದ ಹುಡುಗಿಗೆ ₹81 ಲಕ್ಷ ಸಂಬಳ, 4 ತಿಂಗಳು ರಜೆ! ಆದರೆ ಈ ಕೆಲಸ ಯಾರಿಗೂ ಬೇಡ್ವಂತೆ!

ಜಾಹೀರಾತು

ಬಿಎಸ್‌ಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ

ಉತ್ತರ ಪ್ರದೇಶ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಏಕಾಂಗಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ ಮಾಯಾವತಿ ಅವರು, ‘ವಿಪಕ್ಷಗಳ ಬಗ್ಗೆ ಬಿಎಸ್‌ಪಿ ಪಕ್ಷದ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಎಸ್‌ಪಿ ಪಕ್ಷದ ಮುಖ್ಯಸ್ಥರು ಬಣ್ಣ ಬದಲಾಯಿಸಿದ ಗೋಸುಂಬೆಯಂತೆ ಹೇಳಿಕೆ ನೀಡುತ್ತಿದ್ದಾರೆ. ಇಂಡಿಯಾ ಮೈತ್ರಿಯ ಬಗ್ಗೆ ಬಹುಜನರು ಎಚ್ಚರಿಕೆ ವಹಿಸಬೇಕು ಎಂದರು.

ಸಿಂಪಲ್ ಲುಕ್​ನಲ್ಲೂ ಬಲು ಸುಂದರಿ Megha Shetty


ಸಿಂಪಲ್ ಲುಕ್​ನಲ್ಲೂ ಬಲು ಸುಂದರಿ Megha Shetty

ಇಂಡಿಯಾ ಮೈತ್ರಿಯೊಂದಿಗೆ ಚುನಾವಣೆ ಎದುರಿಸುವುದರಿಂದ ಪಕ್ಷಕ್ಕೆ ಮಾತ್ರ ಲಾಭ ಎಂದ ಮಾಯಾವತಿ, ಹಾಗಾಗಿ ಬಿಎಸ್‌ಪಿ ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ ಎಂದು ಹೇಳಿದ್ದಾರೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]