ಜನವರಿ 22 ಭಾರತದ (India) ಅಸಂಖ್ಯಾತ ರಾಮ (Ram) ಭಕ್ತರಿಗೆ ಬಹಳ ಮುಖ್ಯವಾದ ದಿನವಾಗಿದೆ. ಈ ದಿನ ಅಯೋಧ್ಯೆಯ (Ayodhya( ರಾಮಮಂದಿರದಲ್ಲಿ (Ram Madir) ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಇದೊಂದು ಅವಿಸ್ಮರಣೀಯ ದಿನವಾಗಿ ಇತಿಹಾಸದ (History) ಪುಟಗಳಲ್ಲಿ ಉಳಿಯಲಿದೆ. ಈ ಸಮಯದಲ್ಲಿ ಎಲ್ಲೆಡೆ ರಾಮಚರಿತ ಮಾನಸಕ್ಕೆ ಬೇಡಿಕೆ ಹೆಚ್ಚಾಗಿದೆ. ಅನೇಕ ರಾಮಭಕ್ತರು ರಾಮಚರಿತಮಾನಸ (Ramacharitamanasa) ಓದಲು ಆರಂಭಿಸಿದ್ದಾರೆ. ಈಗಾಗಲೇ ಅದನ್ನ ಕೆಲವರು ಖರೀದಿ ಮಾಡಿದ್ದಾರೆ. ಬಹಳಷ್ಟು ಜನರು ಆನ್‌ಲೈನ್‌ನಲ್ಲಿ ಇದನ್ನ ಖರೀದಿ ಮಾಡಲು ಪ್ರಯತ್ನ ಸಹ ಮಾಡಿದ್ದಾರೆ. ಇದನ್ನೆಲ್ಲಾ ನೋಡಿದ ಗೀತಾ ಪ್ರೆಸ್, ರಾಮಚರಿತಮಾನಸವನ್ನು ಉಚಿತವಾಗಿ ಪಡೆಯುವ ಅವಕಾಶ ಮಾಡಿಕೊಟ್ಟಿದೆ.
ಯಾವುದಿದು ಸಂಸ್ಥೆ?
ಹೌದು, ವರ್ಷಗಳ ಇತಿಹಾಸ ಹೊಂದಿರುವ ಈ ಗೀತಾ ಪ್ರೆಸ್ ಭಕ್ತರಿಗಾಗಿ ಈ ರಾಮಚರಿತ ಮಾನಸವನ್ನ ಉಚಿತವಾಗಿ ಓದಲು ಅವಕಾಶ ಮಾಡಿಕೊಡುತ್ತಿದೆ. ನಾವು ಈ ಗೀತಾ ಪ್ರೆಸ್ ಬಗ್ಗೆ ಇತಿಹಾಸ ತಿಳಿದುಕೊಳ್ಳುವುದಾದರೆ ಈ ಗೀತಾ ಪ್ರೆಸ್ 1923 ರಲ್ಲಿ ಸ್ಥಾಪನೆಯಾದ ಸಂಸ್ಥೆಯಾಗಿದೆ. ಇದು ವಿಶ್ವದ ಅತಿದೊಡ್ಡ ಪ್ರಕಾಶಕರಲ್ಲಿ ಒಂದು ಎಂದು ಖ್ಯಾತಿಗಳಿಸಿದೆ. ಇನ್ನು ವ್ಯವಸ್ಥಾಪಕಿ ಲಲಮಣಿ ತ್ರಿಪಾಠಿ ಮಾತನಾಡಿ, 15 ಭಾಷೆಗಳಲ್ಲಿ 95 ಕೋಟಿಗೂ ಹೆಚ್ಚು ಪುಸ್ತಕಗಳನ್ನು ನಮ್ಮ ಸಂಸ್ಥೆ ಪ್ರಕಟ ಮಾಡಿದೆ ಎಂದಿದ್ದಾರೆ. ಹಾಗೆಯೇ, ಗೋರಖ್‌ಪುರ ಮೂಲದ ಈ ಸಂಸ್ಥೆಗೆ ಕಳೆದ ವರ್ಷ ಗಾಂಧಿ ಶಾಂತಿ ಪ್ರಶಸ್ತಿ ಲಭಿಸಿದೆ.
ಕೊಪ್ಪಳದ ಭೈರಾಪುರದ ಕಥೆ ಇದು!
ಈ ಸಂಸ್ಥೆಯು 2022ರಲ್ಲಿ 75 ಸಾವಿರ ರಾಮಚರಿತಮಾನಸ ಪ್ರತಿಗಳನ್ನು ಮುದ್ರಿಸಿದೆ. ಆದರೆ ಅಯೋಧ್ಯೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದೃಷ್ಟಿಯಿಂದ ಈ ಪುಸ್ತಕದ ಬೇಡಿಕೆ ಎಲ್ಲೆಡೆ ಹೆಚ್ಚಾಗುತ್ತಿದೆ. ಇದನ್ನ ಮರಳಿ ಮುದ್ರಣ ಮಾಡಲು ಸಮಯಾವಕಾಶ ಸಹ ಇಲ್ಲ. ಹಾಗಾಗಿ ಸಂಸ್ಥೆಯು ಆನ್‌ಲೈನ್‌ನಲ್ಲಿ 10 ಭಾಷೆಗಳಲ್ಲಿ ಪಿಡಿಎಫ್ ರೂಪದಲ್ಲಿ ಉಚಿತವಾಗಿ ಓದಲು ಅವಕಾಶ ಮಾಡಿಕೊಟ್ಟಿದೆ.
ಉಚಿತವಾಗಿ ಇದನ್ನ ಓದುವುದು ಹೇಗೆ?
– ಮೊದಲು ಅವರ ಅಧಿಕೃತ ವೆಬ್ಸೈಟ್ ಆದ https://www.gitapress.org/ ಗೆ ಹೋಗಿ
– ಅಲ್ಲಿ ನೀವು ಹಿಂದಿ, ಇಂಗ್ಲಿಷ್, ಗುಜರಾತಿ, ಒಡಿಯಾ, ತೆಲುಗು, ಮರಾಠಿ, ಕನ್ನಡ, ಬೆಂಗಾಲಿ, ನೇಪಾಳಿ, ಅಸ್ಸಾಮಿ ಭಾಷೆಗಳ ಆಯ್ಕೆಗಳು ಕಾಣಿಸುತ್ತದೆ. ನಿಮಗೆ ಯಾವ ಭಾಷೆ ಬೇಕೋ ಅದನ್ನ ಆಯ್ಕೆ ಮಾಡಿಕೊಳ್ಳಿ. ಉದಾಹರಣೆ ನಿಮಗೆ ಕನ್ನಡ ಬೇಕು ಅಂದರೆ ಅದನ್ನ ಸೆಲೆಕ್ಟ್ ಮಾಡಿ.
ಇದನ್ನೂ ಓದಿ:
ಶ್ರೀರಾಮನಿಗಿಂತ ದೊಡ್ಡದೊಂದಿದೆ, ಅದೇನು ಗೊತ್ತಾ?
ಅದನ್ನ ಕ್ಲಿಕ್ ಮಾಡಿದ ನಂತರ ನಿಮಗೆ ಹೊಸ ವಿಂಡೋ ಓಪನ್ ಆಗಿ ಅದರಲ್ಲಿ ಪಿಡಿಎಫ್ ಸಿಗುತ್ತದೆ. ಇದರಲ್ಲಿ ಒಟ್ಟು 944 ಪುಟಗಳಿವೆ. ಪ್ರತಿಯೊಂದು ಪುಟವನ್ನು ಪ್ರತ್ಯೇಕವಾಗಿ ಹಾಗೂ ಸಮಯವನ್ನ ಕೊಟ್ಟು ಓದಲು ಅವಕಾಶವಿದೆ. ಆದರೆ ನೀವು ಈ ಪಿಡಿಎಫ್ಗಳನ್ನ ಡೌನ್ಲೋಡ್ ಮಾಡಲು ಅವಕಾಶವನ್ನ ಮಾತ್ರ ಸಂಸ್ಥೆ ನೀಡಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ