ರಾಮಾಯಣದಲ್ಲಿ (Ramayana) ರಾಮ (Rama) ಹಾಗೂ ಹನುಮಂತನ (Hanuman) ಸ್ನೇಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ರಾಮನಿಗಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟವನು ಈ ಹನುಮ. ಅಷ್ಟೇ ಅಲ್ಲದೇ, ರಾಮನಿಗಾಗಿ ಎಲ್ಲರಿಗಿಂತ ಮೊದಲು ಹನುಮಂತನ ಲಂಕೆಗೆ (Lanke) ಹೋಗಿದ್ದ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಲಂಕೆಯಲ್ಲಿ ಸೀತೆಯನ್ನ (Sita) ಭೇಟಿ ಮಾಡಿದ ಹನುಮಂತ ಸೀತೆಯನ್ನ ಏಕೆ ಕರೆತರಲಿಲ್ಲ. ಹನುಮಂತನ ಜೊತೆ ಸೀತೆ ಏಕೆ ಬರಲು ಒಪ್ಪಲಿಲ್ಲ ಎಂಬುದು ಅನೇಕರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಹನುಮಂತನ ನೋಡಿ ಹೆಸರಿದ್ದ ಸೀತೆ
ಯಾವಾಗ ಹನುಮಂತನ ಸೀತೆಯ ಬಳಿ ಹೋಗಿ ನನ್ನನ್ನ ರಾಮ ಕಳುಹಿಸಿದ್ದು ಎಂದಾಗ ನಂಬಿರಲಿಲ್ಲ. ಹನುಮಂತನ ಮೇಲೆ ಸಿಡುಕಿದ್ದಳು ಸಹ. ಆದರೆ ರಾಮ ಕೊಟ್ಟ ಉಡುಗೊರೆ ನೋಡಿ ಸುಮ್ಮನಾಗಿದ್ದಳು. ಹಾಗಂತ ಹನುಮಂತನ ಜೊತೆ ಬರಲು ಆಕೆಯ ಧೈರ್ಯವಿರಲಿಲ್ಲ. ಆತನ ಧೈತ್ಯ ದೇಹದ ದರ್ಶನವಾದ ನಂತರ ಸಹ ಆಕೆ ಒಪ್ಪಿರಲಿಲ್ಲ.
2024ರಲ್ಲಿ ಎದುರಾಗಲಿದೆ ದೊಡ್ಡ ಪ್ರಮಾದ!; ಬಾಬಾ ವಂಗಾ ಭವಿಷ್ಯವಾಣಿ
ಹನುಮಂತ ಪರಪುರುಷ ಎನ್ನುವ ಕಾರಣ
ಸೀತೆಗೆ ರಾಮನನ್ನ ನೋಡಬೇಕು ಎನ್ನುವ ಹಂಬಲ ಇತ್ತು, ಆದರೆ ಆಕೆ ಹನುಮಂತನ ಜೊತೆ ಹೋಗಲು ಮಾತ್ರ ಒಪ್ಪಲಿಲ್ಲ. ಅದಕ್ಕೆ ಇನ್ನೊಂದು ಕಾರಣ ಪತಿ ಧರ್ಮ. ಹನುಮಂತನ ಪರಪುರುಷ, ಆಕೆ ಪತಿವ್ರತ. ಆಕೆಯೇ ಸ್ವಇಚ್ಛೆಯಿಂದ ಪರ ಪುರುಷರನ್ನ ಮುಟ್ಟಬಾರದು ಎನ್ನುವ ಕಾರಣ. ಪರ ಪುರುಷನನ್ನು ಮುಟ್ಟಿದರೆ ಪತಿ ಧರ್ಮಕ್ಕೆ ಧಕ್ಕೆಯಾಗುತ್ತದೆ ಎನ್ನುವ ನಂಬಿಕೆ ಆಕೆಯದ್ದು.
ಶ್ರೀರಾಮನ ಬರಬೇಕು ಎನ್ನುವ ಆಸೆ
ಹನುಮಂತನ ಜೊತೆಗೆ ಆಕೆ ಹೋಗಿದ್ದರೆ ರಾಮ ಬಂದು ಕರೆದುಕೊಂಡು ಹೋದ ಹಾಗೆ ಇರುವುದಿಲ್ಲ. ಆಕೆ ಅನೇಕ ಬಾರಿ ರಾವಣನಿಗೆ ರಾಮ ಬಂದೇ ಬರುತ್ತಾನೆ ಎಂದಿದ್ದಳು. ಹಾಗಾಗಿ, ರಾಮನಿಂದಲೇ ರಾವಣ ಸಂಹಾರವಾಗಬೇಕು ಎನ್ನುವ ಆಸೆ ಆಕೆಗಿತ್ತು. ಈ ಕಾರಣದಿಂದ ಸೀತೆ ಹನುಮಂತನ ಜೊತೆ ಹೋಗಲು ಒಪ್ಪಿರಲಿಲ್ಲ.
ಇದನ್ನೂ ಓದಿ:
ರಾಮನಿಗೂ ಜಟಾಯುವಿಗು ಸಂಬಂಧವೇನು? ಪ್ರಾಣದ ಹಂಗು ತೊರೆದು ಹೋರಾಡಿದ್ದೇಕೆ?
ರಾಮನ ಮೇಲಿನ ನಂಬಿಕೆ
ಮತ್ತೊಂದು ಮುಖ್ಯವಾದ ಕಾರಣ ಎಂದರೆ ರಾಮನ ಮೇಲೆ ಆಕೆಗೆ ಇದ್ದ ಅಪರಿಮಿತ ನಂಬಿಕೆ ಎನ್ನಬಹುದು. ರಾಮ ಬಂದು ರಾವಣನೊಂದಿಗೆ ಹೋರಾಡಿ ತನ್ನನ್ನ ಕರೆದುಕೊಂಡು ಹೋಗುತ್ತಾನೆ ಎನ್ನುವ ನಂಬಿಕೆ ಆಕೆಗಿತ್ತು. ಅಲ್ಲದೇ, ರಾಮನ ಬದಲು ಹನುಮಂತನ ಜೊತೆಗೆ ಹೋದರೆ ಜನ ರಾಮನ ಶಕ್ತಿಯ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ ಎನ್ನುವ ಭಯ ಸಹ ಕಾಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ