ರಾಯ್ಪುರ: ಅಯೋಧ್ಯೆಯಲ್ಲಿ ರಾಮಮಂದಿರದ (Ram Mandir) ಉದ್ಘಾಟನೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಜನವರಿ 22ರಂದು ದೇವಸ್ಥಾನದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ (Prana Pratishta) ಕಾರ್ಯಕ್ರಮಕ್ಕೆ ದೇಶಾದ್ಯಂತ 11 ಸಾವಿರ ಗಣ್ಯರನ್ನು ಆಹ್ವಾನಿಸಲಾಗಿದೆಯಂತೆ. ಈ ಲಿಸ್ಟ್ನಲ್ಲಿ 700 ಮರಣೋತ್ತರ ಪರೀಕ್ಷೆಗಳಲ್ಲಿ ಭಾಗವಹಿಸಿದ ವೈದ್ಯಕೀಯ ಸಹಾಯಕಿಗೂ ರಾಮಮಂದಿರ ಟ್ರಸ್ಟ್ ಆಹ್ವಾನ ನೀಡಿದೆ.
700ಕ್ಕೂ ಹೆಚ್ಚು ಶವಪರೀಕ್ಷೆ
ಛತ್ತೀಸ್‌ಗಢದ ಸಂತೋಷಿ ದುರ್ಗಾ 18 ವರ್ಷಗಳಿಂದ ನರಹರಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಭಾಗವಾಗಿ ಸುಮಾರು 700 ಮರಣೋತ್ತರ ಪರೀಕ್ಷೆಗಳಲ್ಲಿ ಭಾಗವಹಿಸಿದ್ದಾರೆ. ಆಕೆಯ ಸೇವೆಯನ್ನು ಗುರುತಿಸಿ ಅನೇಕ ಗೌರವಗಳನ್ನು ಪಡೆದಿದ್ದಾರೆ. ಇದೀಗ ದೇಶವೇ ಎದುರು ನೋಡುತ್ತಿರುವ ಆಯೋಧ್ಯೆಗೆ ಆಹ್ವಾನ ಬಂದಿದೆ.
ಈ ಬಗ್ಗೆ ಮಾತನಾಡಿದ ದುರ್ಗಾ ಸಂತಸ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಾನು ಈ ಕರೆಯನ್ನು ನಿರೀಕ್ಷಿಸಿರಲಿಲ್ಲ, ಇದೆಲ್ಲಾ ಆ ಭಗವಾನ್ ರಾಮನು ಆಶೀರ್ವದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚಿಂದಿ ಆಯುವ ಮಹಿಳೆಗೆ ಸಿಕ್ತು ಆಹ್ವಾನ
ಛತ್ತೀಸ್‌ಗಢದ (Chattisgarh) 85 ವರ್ಷದ ಬಿದುಲಾ ಬಾಯಿ ದೇವರ್ (Bidula Bai Dewar) ಎಂಬ ಚಿಂದಿ ಆಯುವ ಮಹಿಳೆಗೂ ಕೂಡ ರಾಮ ಲಲ್ಲಾನ ದರ್ಶನಕ್ಕಾಗಿ ಅಯೋಧ್ಯೆಗೆ ಆಹ್ವಾನಿಸಲಾಗಿದೆ. ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ವೇಳೆ ಬಿದುಲಾ ಬಾಯಿ ಇಳಿ ವಯಸ್ಸಿನಲ್ಲೂ ತಾನೂ ಕಷ್ಟಪಟ್ಟು ದುಡಿದಿದ್ದ ಒಂದು ದಿನದ ಸಂಪಾದನೆಯ ಅರ್ಧಮೊತ್ತವನ್ನು ಮಂದಿರ ನಿರ್ಮಾಣಕ್ಕೆ ನೀಡಿದ್ದಳು ಎಂಬುದನ್ನ ಸ್ಮರಿಸಬೇಕು.
ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?
20 ರೂಪಾಯಿ ನೀಡಿದ್ದ ಅಜ್ಜಿ!
85 ವರ್ಷದ ಬಿದುಲಾ ಬಾಯಿ ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸುವ ವೇಳೆ 20 ರೂಪಾಯಿಯನ್ನ ದೇಣಿಗೆಯಾಗಿ ನೀಡಿದ್ದಳು. ಆಕೆ ನೀಡಿದ ಹಣ ಚಿಕ್ಕಿದಾಗಿರಬಹುದು, ಆದರೆ ಆಕೆಯಲ್ಲಿ ಶ್ರೀರಾಮನ ಬಗ್ಗೆ ಇದ್ದ ಭಕ್ತಿಯ ಮಟ್ಟವು ತುಂಬಾ ದೊಡ್ಡದಾಗಿತ್ತು. ಬಿದುಲಾ ಬಾಯಿ ರಸ್ತೆ ಬದಿಯಲ್ಲಿ ಚಿಂದಿಯನ್ನು ಆಯ್ದು 40 ರೂಪಾಯಿಗಳನ್ನು ಸಂಗ್ರಹಿಸಿದ್ದರು. ಅದರಲ್ಲಿ ಅರ್ಧವನ್ನು ರಾಮನಿಗೆ ದಾನ ನೀಡಿದ್ದ ದೊಡ್ಡಗುಣ ಎಂದೇ ಭಾವಿಸಬೇಕು.
ಇದನ್ನೂ ಓದಿ:
ರಾಮಮಂದಿರಕ್ಕೆ ₹27 ಲಕ್ಷ ದೇಣಿಗೆ ನೀಡಿದ್ದ ನಿವೃತ್ತ ನರ್ಸ್! ಪ್ರಾಣ ಪ್ರತಿಷ್ಠಾಗೆ ಸಿಕ್ತು ವಿಶೇಷ ಆಹ್ವಾನ
ಅತಿಥಿಗಳಿಗೆ ಉಡುಗೊರೆಯಾಗಿ ಮಣ್ಣು
ಪ್ರಾಣಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಾವಿರಾರು ಜನರು ಅಯೋಧ್ಯೆಗೆ ಬರಲಿದ್ದಾರೆ. ನಾಗರಿಕ ಪ್ರಶಸ್ತಿ ಪುರಸ್ಕೃತರು, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು, ಜೈನ, ಬೌದ್ಧ, ಸಿಖ್ ಸೇರಿದಂತೆ ಇತರ ಸಮುದಾಯಗಳ ಧಾರ್ಮಿಕ ಮುಖಂಡರು, ಕ್ರೀಡಾಪಟುಗಳು, ತ್ರಿಪಡೆಗಳ ಮಾಜಿ ಮುಖ್ಯಸ್ಥರು, ರಾಜಕೀಯ, ಮಾಧ್ಯಮ, ಉದ್ಯಮಿಗಳು, ರಾಯಭಾರಿಗಳು, ನೊಬೆಲ್, ಭಾರತ ರತ್ನದಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದವರು , ಪದ್ಮಾ, ಪರಮವೀರ ಚಕ್ರ ಮತ್ತಿತರರು ಇರಲಿದ್ದಾರೆ.
‘ರಾಮ ಜನ್ಮಭೂಮಿ ಆಂದೋಲನ’ದಲ್ಲಿ ಪ್ರಾಣ ಕಳೆದುಕೊಂಡ ಕರಸೇವಕರ ಕುಟುಂಬದ ಹಿರಿಯರು ಸೇರಿದಂತೆ ಹಲವು ಮಂದಿ ಆಹ್ವಾನಿತರಾಗಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್‌ನ ಮೂಲಗಳು ಬಹಿರಂಗಪಡಿಸಿವೆ. ಅಯೋಧ್ಯೆ ದೇಗುಲ ಕಾನೂನು ಹೋರಾಟದಲ್ಲಿ ಪಾಲ್ಗೊಂಡಿದ್ದ ವಕೀಲರಿಗೂ ಆಹ್ವಾನ ನೀಡಲಾಗಿದೆ ಎಂದು ವರದಿಯಾಗಿದೆ ಎಲ್ಲರಿಗೂ ಅಯೋಧ್ಯೆಯ ಮಣ್ಣನ್ನು ಉಡುಗೊರೆಯಾಗಿ ನೀಡಲಾಗುತ್ತದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ