ಭಾರತ್​ ಜೋಡೋ ಯಾತ್ರೆಯಲ್ಲಿರುವ ಕಾಂಗ್ರೆಸ್​ಗೆ ಶಾಕ್! I.N.D.I.A ಬಿಟ್ಟು NDA ಸೇರಿದ ಮಾಜಿ ಕೇಂದ್ರ ಸಚಿವ! – News18 ಕನ್ನಡ

👇खबर सुनने के लिए प्ले बटन दबाएं

ಮುಂಬೈ: ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi) ಭಾರತ್ ಜೋಡೋ ನ್ಯಾಯ ಯಾತ್ರೆಗೆ (Bharat Jodo Nyay Yatra) ಚಾಲನೆ ನೀಡುತ್ತಿದ್ದಂತೆ, ಇತ್ತ ಕಾಂಗ್ರೆಸ್ (Congress) ಪಕ್ಷಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಿಲಿಂದ್ ದಿಯೋರಾ (Miland Deora) ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದೊಂದಿಗಿನ 55 ವರ್ಷಗಳ ಒಡನಾಟ ಅಂತ್ಯಗೊಳಿಸಿದ್ದಾರೆ. 26 ಪಕ್ಷಗಳು ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್​ಡಿಎ ವಿರುದ್ಧ ಹೋರಾಡುವುದಕ್ಕಾಗಿ INDIA ಬ್ಲಾಕ್ ರಚಿಸಿಕೊಂಡಿದ್ದರೆ, ಇತ್ತ ಕಾಂಗ್ರೆಸ್​ನ ಪ್ರಬಲ ನಾಯಕನೇ NDAನಲ್ಲಿರುವ ಶಿವಸೇನೆ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ಜಾಹೀರಾತು

55 ವರ್ಷಗಳ ಒಡನಾಟ ಅಂತ್ಯ

ಈ ಕುರಿತು ಟ್ವೀಟ್ ಮಾಡಿರುವ ಮಿಲಿಂದ್, ಸುಮಾರು 55 ವರ್ಷಗಳ ಕಾಂಗ್ರೆಸ್​ ಪಕ್ಷದೊಂದಗಿನ ನನ್ನ ಕುಟುಂಬದ ಒಡನಾಟ ಇಂದಿಗೆ ಅಂತ್ಯವಾಗಿದೆ. ಇಷ್ಟು ವರ್ಷ ನನ್ನನ್ನು ಬೆಂಬಲಿಸಿದ ಕಾರ್ಯಕರ್ತರು, ಸಹೋದ್ಯೋಗಿಗಳು ಮತ್ತು ಪಕ್ಷದ ಮುಖಂಡರಿಗೆ ಧನ್ಯವಾದಗಳು. ನಾನು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಮಿಲಿಂದ್​ ಹಿರಿಯ ನಾಯಕ ಮುರಳಿ ದಿಯೋರಾ ಅವರ ಪುತ್ರ. ಅವರು ಮುಂಬೈ ದಕ್ಷಿಣ ಲೋಕಸಭೆಯಿಂದ 2004 ಮತ್ತು 2009 ರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಇದನ್ನೂ ಓದಿ: Maldives vs India: ನಾವು ಯಾರ ಹಂಗಲ್ಲೂ ಇಲ್ಲ! ಸೇನೆ ವಾಪಸ್ ಕರೆಸಿಕೊಳ್ಳಲು ಭಾರತಕ್ಕೆ ಡೆಡ್​ಲೈನ್ ಕೊಟ್ಟ ಮಾಲ್ಡೀವ್ಸ್ ಅಧ್ಯಕ್ಷ!

ಸೀಟು ಸಿಗದಿರುವ ಸಾಧ್ಯತೆ

ಆದರೆ ಅವರು 2014 ಮತ್ತು 2019 ರ ಸಂಸತ್ತಿನ ಚುನಾವಣೆಗಳಲ್ಲಿ ಶಿವಸೇನೆ ನಾಯಕ (ಉದ್ಧವ್ ಬಣ) ಅರವಿಂದ್ ಸಾವಂತ್ ವಿರುದ್ಧ ಸೋತಿದ್ದರು. ಈ ನಡುವೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಪಕ್ಷಕ್ಕೆ ದಿಯೋರಾ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ಉದ್ಧವ್ ಬಣದಲ್ಲಿರುವ ಅರವಿಂದ್​ ವಿರುದ್ಧ ಒರಿಜಿನಲ್​ ಶಿವಸೇನೆಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದು ಶಿಂಧೆ ಬಣಕ್ಕೆ ಅನುಕೂಲವಾದರೆ, ಕಾಂಗ್ರೆಸ್ ಪಕ್ಷ ಮತ್ತು ಉದ್ದವ್ ಶಿವಸೇನೆಗೆ ದೊಡ್ಡ ಹಿನ್ನಡೆಯಾಗಿದೆ.

ಜಾಹೀರಾತು
ಹಸುಗಳೊಂದಿಗೆ ನರೇಂದ್ರ ಮೋದಿ ಸಂಕ್ರಾಂತಿ!


ಹಸುಗಳೊಂದಿಗೆ ನರೇಂದ್ರ ಮೋದಿ ಸಂಕ್ರಾಂತಿ!

ಕಾಂಗ್ರೆಸ್​ಗೆ ಬಿಡುತ್ತಿರುವ ಪ್ರಮುಖ ನಾಯಕರು

ಇನ್ನು ಕಾಂಗ್ರೆಸ್​ಗೆ ಗುಡ್​ ಬೈ ಹೇಳುತ್ತಿರುವ ಮೊದಲ ಕಾಂಗ್ರೆಸ್ ನಾಯಕರಲ್ಲ, ಈಗಾಗಲೇ ಹಲವು ನಾಯಕರು ರಾಜೀನಾಮೆ ನೀಡಿದ್ದಾರೆ. ಕಳೆದ ಐದು ವರ್ಷದಲ್ಲಿ 10 ಪ್ರಮುಖ ನಾಯಕರು ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ್ದಾರೆ. ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಜ್ಯೋತಿರಾದಿತ್ಯ ಸಿಂಧಿಯಾ ಮುಂತಾದವರು ಪಕ್ಷ ತೊರೆದಿದ್ದರು.

ಮುಂಬೈ ದಕ್ಷಿಣ ಕ್ಷೇತ್ರವನ್ನು ಉದ್ಧವ್ ಠಾಕ್ರೆ ಬಣಕ್ಕೆ ಹಂಚಿಕೆ ಮಾಡುವ ಬಗ್ಗೆ ಅವರು ಇತ್ತೀಚೆಗೆ ಮಿಲಿಂದ್ ಅಸಮಾಧಾನ ವ್ಯಕ್ತಪಡಿಸಿದ್ದರು. ಕಳೆದ ಭಾನುವಾರ ವೀಡಿಯೋ ಬಿಡುಗಡೆ ಮಾಡಿದ್ದ ದಿಯೋರಾ, ಮೈತ್ರಿ ಪಕ್ಷ ಇಂತಹ ಘೋಷಣೆಗಳನ್ನು ನಿಲ್ಲಿಸದಿದ್ದರೆ ತಮ್ಮ ಪಕ್ಷವೂ ಹಲವು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಳೆದುಕೊಳ್ಳಲಿದೆ ಎಂದು ಟೀಕಿಸಿದರು. ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]