Pongal: ತಲೆ ಮೇಲೆ ಕಬ್ಬಿಟ್ಟುಕೊಂಡು 8 ವರ್ಷಗಳಿಂದ ಸೈಕಲ್​ನಲ್ಲೇ 14 ಕಿಮೀ ಹೋಗಿ ಮಗಳಿಗೆ ಪೊಂಗಲ್ ಉಡುಗೊರೆ ನೀಡುವ ತಂದೆ! ಕಾರಣ ಇಲ್ಲಿದೆ

👇खबर सुनने के लिए प्ले बटन दबाएं

ತಮಿಳುನಾಡು: ದೇಶದೆಲ್ಲೆಡೆ ತಮಿಳರು ಪೊಂಗಲ್ ಹಬ್ಬವನ್ನು (Pongal Gift) ಆಚರಿಸುತ್ತಿದ್ದಾರೆ. ಈ ಹಬ್ಬದ ಆಚರಣೆ ವೇಳೆ ಪೋಷಕರು ತಮ್ಮ ಮಕ್ಕಳಿಗೆ ಹಬ್ಬದ ಉಡುಗೊರೆ (Festival Gift) ನೀಡುತ್ತಾರೆ. ಇಲ್ಲೊಬ್ಬ ವೃದ್ಧ ತನ್ನ ಮಗಳಿಗೆ ಮತ್ತು ಮೊಮ್ಮಕ್ಕಳಿಗೆ ಪೊಂಗಲ್ ಹಬ್ಬದ ಉಡುಗೊರೆಯನ್ನ ತನ್ನ ಸೈಕಲ್​ನಲ್ಲಿ ತೆಗೆದುಕೊಂಡು ಹೋಗಿ ನೀಡಿ ಸಖತ್ ಸುದ್ದಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಮಗಳ ಮೇಲಿ ಆತನ ಪ್ರೇಮವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ವಿಡಿಯೋದಲ್ಲಿ ಏನಿದೆ?

ತಮಿಳುನಾಡಿನ ಪಡುಕೊಟ್ಟೈನ ವೃದ್ಧ ವ್ಯಕ್ತಿ ಪೊಂಗಲ್ ಸಂದರ್ಭದಲ್ಲಿ ಮಗಳಿಗೆ ಉಡುಗೊರೆಯಾಗಿ ನೀಡಲು ಕಬ್ಬಿನ ಕಂತೆಯನ್ನ ಕಟ್ಟಿಕೊಂಡು, ಅದನ್ನೈ ತಲೆ ಮೇಲಿಟ್ಟು 14 ಕಿಲೋ ಮೀಟರ್​ ಸೈಕಲ್​ನಲ್ಲಿ ತೆಗೆದುಕೊಂಡು ಹೋಗುವುದನ್ನ ಕಾಣಬಹುದು. ತನ್ನ ಮಗಳ ಮನೆಗೆ ಸೈಕಲ್​ನಲ್ಲಿ ತೆರಳುತ್ತಿರುವ ಆ ವ್ಯಕ್ತಿಯ ಪ್ರೇಮಕ್ಕೆ ಅಲ್ಲಿ ನೆರೆದಿದ್ದ ಜನರು ಅಚ್ಚರಿ ವ್ಯಕ್ತಪಡಿಸಿ, ಆತನನ್ನು ಹುರಿದುಂಬಿಸಿ ಕಳುಹಿಸುತ್ತಿರುವುದನ್ನ ಕಾಣಬಹುದು.

ಜಾಹೀರಾತು

ಮೊಮ್ಮಕ್ಕಳು ಹುಟ್ಟಿದ ಮೇಲೆ ಸೈಕಲ್ ಪ್ರಯಾಣ ಆರಂಭ

ಎಎನ್​ಐ ಜೊತೆಗೆ ಮಾತನಾಡಿದ ಚೆಲ್ಲಾದುರೈ, ತನ್ನ ಮಗಳು ಸುಂದರಪಾಲ್​ಗೆ ಮದುವೆಯಾದ ನಂತರ 10 ವರ್ಷಗಳವರೆಗೆ ಮಕ್ಕಳಿರಲಿಲ್ಲ. 10 ವರ್ಷಗಳ ನಂತರ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಈ ಖುಷಿಗೆ ಅಂದಿನಿಂದ ಮಗಳು ಮತ್ತು ಮೊಮ್ಮಕ್ಕಳಿಗೆ ಸೈಕಲ್​ನಲ್ಲೇ ಪೊಂಗಲ್ ಉಡುಗೊರೆ ನೋಡಲು ಹೋಗುತ್ತಿದ್ದೇನೆ. ಕಳೆದ 8 ವರ್ಷಗಳಿಂದ ಇದೇ ರೀತಿ ತಲೇ ಮೇಲೆ ಇಟ್ಕೊಂಡು ಹೋಗುತ್ತೇನೆ. ನಾನು ಆರೋಗ್ಯವಾಗಿದ್ದೇನೆ, ಹಾಗಾಗಿ ಸೈಕಲ್​ನಲ್ಲೇ ನನ್ನ ಮಗಳು ಮತ್ತು ಮೊಮ್ಮಕ್ಕಳನ್ನು ನೋಡಲು ಹೋಗುತ್ತೇನೆ ಎಂದು ತಿಳಿಸಿದ್ದಾರೆ.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]