Ram Mandir: ರಾಮಮಂದಿರಕ್ಕೆ ₹27 ಲಕ್ಷ ದೇಣಿಗೆ ನೀಡಿದ್ದ ನಿವೃತ್ತ ನರ್ಸ್​! ಪ್ರಾಣ ಪ್ರತಿಷ್ಠಾಗೆ ಸಿಕ್ತು ವಿಶೇಷ ಆಹ್ವಾನ

👇खबर सुनने के लिए प्ले बटन दबाएं

ಗುಜರಾತ್: ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಉದ್ಘಾಟನೆಗೆ ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ರಾಮಲಲ್ಲಾ ಪ್ರಾಣ ಪ್ರತಿಷ್ಠಾ (Prana Pratishta) ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಇದೇ ವೇಳೆ ರಾಮ ಮಂದಿರಕ್ಕೆ ತಮ್ಮ ನಿವೃತ್ತಿ ಹಣವನ್ನು (Retirement Money) ದೇಣಿಗೆ ನೀಡಿದ್ದ 82 ವರ್ಷದ ಮಹಿಳೆಗೆ ಜನವರಿ 22ರಂದು ಕಾರ್ಯಕ್ರಮ ಆಗಮಿಸಲು ಆಹ್ವಾನ ನೀಡಲಾಗಿದೆ. ನಿವೃತ್ತ ನರ್ಸ್ ಆಗಿರುವ ಭಾನುಬೆನ್​ ಮತ್ತು ಅವರ ಸಹೋದರಿ ನಿವೃತ್ತ ಶಿಕ್ಷಕಿ ಬರೋಬ್ಬರಿ 27 ಲಕ್ಷ ರೂಪಾಯಿಯನ್ನ ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದರು. ಇದು ಅವರಿಬ್ಬರ ನಿವೃತ್ತಿಯಿಂದ ಬಂದ ಹಣವಾಗಿತ್ತು.

ಜಾಹೀರಾತು

ಟೆಂಟ್​ನಲ್ಲಿ ರಾಮನನ್ನು ನೋಡಿ ಮರುಗಿದ್ದ ಸಹೋದರಿಯರು

ಸೋಲಂಕಿ ಮತ್ತು ಅವರ ಸಹೋದರು 10 ವರ್ಷಗಳ ಹಿಂದೆ ಅಯೋಧ್ಯೆಗೆ ತೆರಳಿದ್ದಾಗ ಟೆಂಟ್ ಒಂದರಲ್ಲಿ ಶ್ರೀರಾಮನ ಮೂರ್ತಿ ನೋಡಿ ನೋಂದುಕೊಂಡಿದ್ದರಂತೆ. ನಂತರ ದೇವಾಲಯ ನಿರ್ಮಿಸಲು ತಮ್ಮಿಂದಾಗುವ ಸಹಾಯ ಮಾಡಲು ಇಬ್ಬರು ನಿರ್ಧರಿಸಿದ್ದಾರೆ. ಹಾಗಾಗಿ ನಿವೃತ್ತಿ ನಂತರ ಸಿಕ್ಕಿದ ಹಣವನ್ನು ರಾಮಮಂದಿರಕ್ಕೆ ಅರ್ಪಿಸಿದ್ದರು. ಇದೀಗ ಜನವರಿ 22ರಂದು ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದ್ದು, ರಾಮ ಮಂದಿರ ಟ್ರಸ್ಟ್​ ಭಾನುಬೆನ್​ ಸೋಲಂಕಿಗೆ ಅಧಿಕೃತ ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ: Ram Mandir: ಚಿಂದಿ ಆಯುವ ಮಹಿಳೆಗೂ ರಾಮಮಂದಿರ ಉದ್ಘಾಟನೆಗೆ ಆಹ್ವಾನ! ಆಕೆ ನೀಡಿದ್ದ ದೇಣಿಗೆ ಎಷ್ಟು ಗೊತ್ತಾ?

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೋಡುವ ಅದೃಷ್ಟ

ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಸ್ವೀಕರಿಸಿರುವುದು ನನ್ನ ಅದೃಷ್ಟ ಮತ್ತು ಆಶೀರ್ವಾದ ಎಂದು ಪರಿಗಣಿಸುತ್ತೇನೆ. ಈ ನಿಟ್ಟಿನಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ನೋಡುವುದು ನನ್ನ ಜೀವನದಲ್ಲೇ ಅದ್ಭುತ ಅದೃಷ್ಟದ ಕ್ಷಣ. 10 ವರ್ಷಗಳ ಹಿಂದೆ ಭಗವಾನ್ ರಾಮನು ಟೆಂಟ್‌ನಲ್ಲಿ ಕುಳಿತಿರುವುದನ್ನು ನೋಡಿದ್ದೇನೆ, ಅದು ನನ್ನನ್ನು ಭಾವುಕಳನ್ನಾಗಿಸಿತ್ತು. ಆದ್ದರಿಂದ ನಾನು ನನ್ನ ಬಳಿ ಇದ್ದ ಹಣವನ್ನು ದಾನ ಮಾಡಿದ್ದೇನೆ ಎಂದು ಅವರು ಹೇಳಿದರು.

ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?


ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?

ಜಿಲ್ಲೆಯಿಂದ ಇಬ್ಬರಿಗೆ ಆಹ್ವಾನ

ಜಾಹೀರಾತು

ವಿಶೇಷವೆಂದರೆ ಮೋರ್ಬಿ ಜಿಲ್ಲೆಯಲ್ಲಿ ಕೇವಲ ಇಬ್ಬರು ವ್ಯಕ್ತಿಗಳಿಗೆ ಮಾತ್ರ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಒಬ್ಬರು ಆರ್​ಎಸ್​ಎಸ್​ ಆಡಳಿತಾಧಿಕಾರಿಯಾಗಿರುವ ಡಾ. ಜಯಂತಿ ರಿಷಿಯಾ ಹಾಗೂ ಬಾನುಬೆನ್ ಸೋಲಂಕಿಗೆ ಮಾತ್ರ.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]