ಪೊಂಗಲ್ ಆಚರಣೆಯಲ್ಲಿ ಬಾಲಕಿ ಗಾಯನ ಮೆಚ್ಚಿ ತಮ್ಮ ಶಾಲನ್ನ ಉಡುಗೊರೆಯಾಗಿ ಕೊಟ್ಟ ಪಿಎಂ ಮೋದಿ| pm modi gifts his shawl to girl for impressed by the her singing performance at pongal celebrations – News18 ಕನ್ನಡ

👇खबर सुनने के लिए प्ले बटन दबाएं

ನವದೆಹಲಿ: ವಿಶ್ವದಾದ್ಯಂತ ಪೊಂಗಲ್ (Pongal) ಅನ್ನು ಆಚರಿಸುತ್ತಿದ್ದಾರೆ. ಕೇಂದ್ರ ಸಚಿವ ಸಚಿವ ಎಲ್.ಮುರುಗನ್ (Union Minister of State L Murugan) ಅವರ ತಮ್ಮ ದೆಹಲಿ ಮನೆಯಲ್ಲಿ ಪೊಂಗಲ್ ಹಬ್ಬವನ್ನು ಆಚರಿಸಿದ್ದಾರೆ. ಭಾನುವಾರ ಸಚಿವ ಮುರುಗನ್ ಅವರ ಅಧಿಕೃತ ನಿವಾಸದಲ್ಲಿ ಯೋಜಿಸಲಾಗಿದ್ದ ಪೊಂಗಲ್ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ (PM Modi) ಭಾಗವಹಿಸಿದ್ದರು. ಈ ವೇಳೆ ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕೂಡ ಉಪಸ್ಥಿತರಿದ್ದರು. ಪೊಂಗಲ್‌ನಲ್ಲಿ ಪಾಲ್ಗೊಳ್ಳಲು, ಪ್ರಧಾನಿ ಮೋದಿ ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು. ದಕ್ಷಿಣದ ಸಂಪ್ರದಾಯದಂತೆ ಪೂರ್ಣ ವಿಧಿವಿಧಾನಗಳೊಂದಿಗೆ ಪೂಜೆಯನ್ನು ನೆರವೇರಿಸಿದರು. ಹಸುವಿಗೆ ಪೂಜೆ ಸಲ್ಲಿಸಿ ಪ್ರಸಾದ ನೀಡಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು.

ಜಾಹೀರಾತು

ಬಾಲಕಿಗೆ ಶಾಲು ಉಡುಗೊರೆ

ಸಮಾರಂಭದಲ್ಲಿ ತಮಿಳರ ಸಾಂಪ್ರದಾಯಿಕ ಕಲೆಗಳಾದ ಕರಕಟ್ಟಂ, ಪರೈಯಾಟ್ಟಂ, ಸಿಲಂಬಟಂ ಸೇರಿದಂತೆ ವಿವಿಧ ಪ್ರದರ್ಶನಗಳನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಹಾಡು ಮತ್ತು ನೃತ್ಯ ಕಾರ್ಯಕ್ರಮವನ್ನು ಪ್ರಧಾನಿ ಆನಂದಿಸಿದರು. ಈ ಕಾರ್ಯಕ್ರಮದಲ್ಲಿ ಬಾಲಕಿಯೊಬ್ಬಳು ಸತ್ಯಂ ಶಿವಂ ಸುಂದರಂ ಹಾಡನ್ನು ಹಾಡಿದರು. ಆಕೆಯ ಗಾಯನದಿಂದ ಸಂತೋಷಗೊಂಡ ಪ್ರಧಾನಿ ಮೋದಿ ಆಕೆಯನ್ನು ಕರೆದರು. ಬಾಲಕಿ ಸಂತೋಷದಿಂದ ಬಂದು ಮೋದಿ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡಳು. ಈ ವೇಳೆ ಮೋದಿ ತಮ್ಮ ಶಾಲನ್ನು ಯುವ ಗಾಯಕಿಗೆ ವಿಶೇಷ ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ: ಚಿಂದಿ ಆಯುವ ಮಹಿಳೆಗೂ ರಾಮಮಂದಿರ ಉದ್ಘಾಟನೆಗೆ ಆಹ್ವಾನ! ಆಕೆ ನೀಡಿದ್ದ ದೇಣಿಗೆ ಎಷ್ಟು ಗೊತ್ತಾ?

ಶುಭಾಶಯ ಕೋರಿದ ಮೋದಿ

ಪೊಂಗಲ್ ಪೂಜೆಯ ನಂತರ, ಪಿಎಂ ಮೋದಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿ, ಎಲ್ಲರಿಗೂ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದರು. ” ದೇಶವು ನಿನ್ನೆ ಲೋಹ್ರಿ ಹಬ್ಬವನ್ನು ಆಚರಿಸಿದೆ. ಕೆಲವರು ಇಂದು ಮಕರ ಸಂಕ್ರಾಂತಿಯನ್ನು ಆಚರಿಸುತ್ತಿದ್ದಾರೆ ಮತ್ತು ಕೆಲವರು ನಾಳೆ ಆಚರಿಸುತ್ತಾರೆ, ಮಾಘ ಬಿಹು ಕೂಡ ಬರುತ್ತಿದೆ. ಈ ಹಬ್ಬಗಳಿಗಾಗಿ ನಾನು ದೇಶವಾಸಿಗಳಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ ಎಂದರು.

ಜಾಹೀರಾತು
ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?


ರಾಮನಿಗಾಗಿ ಲಂಕೆಗೆ ಹೋದ ಹನುಮ ಮಾಡಿದ್ದೇನು?

ಕುಟುಂಬದವರೊಡೆ ಆಚರಿಸಿದ ಭಾವ

ಇಂದು ಇಲ್ಲಿ ಪೊಂಗಲ್ ಆಚರಿಸುತ್ತಿರುವುದು ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಬ್ಬವನ್ನು ಆಚರಿಸುತ್ತಿರುವಂತೆ ತೋರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪೊಂಗಲ್ ಸಮಯದಲ್ಲಿ ಕೊಯ್ಲು ಮಾಡಿದ ಭತ್ತವನ್ನು ದೇವರಿಗೆ ಅರ್ಪಿಸುವುದು ಸಾಂಪ್ರದಾಯಿಕವಾಗಿದೆ. ನಮ್ಮ ಪ್ರತಿಯೊಂದು ಹಬ್ಬಗಳು ರೈತರಿಗೆ ಸಂಬಂಧಿಸಿವೆ. ತಮಿಳು ಮಹಿಳೆಯರು ತಮ್ಮ ಮನೆಗಳಲ್ಲಿ ಹಾಕುವ ಬಣ್ಣದ ರಂಗೋಲಿಗಳು ದೊಡ್ಡ ವೈಭವ ಅಡಗಿದೆ ಎಂದರು.

ಜಾಹೀರಾತು

ಪೊಂಗಲ್ ಹಬ್ಬವು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಭಾವನೆಯನ್ನು ಬಿಂಬಿಸುತ್ತದೆ. ಈ ಏಕತೆಯ ಭಾವನೆಯು 2047 ರ ಅಭಿವೃದ್ಧಿ ಹೊಂದರಿ ಭಾರತವನ್ನು ಕಟ್ಟಲು ಬೆಂಬಲ ನೀಡುತ್ತದೆ ಎಂದು ಪ್ರಧಾನಿ ಹೇಳಿದರು.

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

Source link

Leave a Comment

  • Up Skill Ninja
  • best news portal development company in india
  • UPSE Coaching
[democracy id="1"]